ವಚನ ವಿಚಾರ – ಸುಮ್ಮನೆ ದುಃಖ

ವಚನ ವಿಚಾರ – ಸುಮ್ಮನೆ ದುಃಖ

ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು
ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು
ಇದಾರಕ್ಕೆ ಆರಕ್ಕೆ
ಇದೇನಕ್ಕೆ ಏನಕ್ಕೆ
ಮಾಯದ ಬೇಳುವೆ ಹುರುಳಿಲ್ಲ
ಕೊಂದು ಕೂಗಿತ್ತು ನೋಡಾ ಗುಹೇಶ್ವರ

[ಆರಕ್ಕೆ-ಬೇಳುವೆ, ಆಶ್ಚರ್ಯ, ಗೊಂದಲ, ಮರುಳು]

ಅಲ್ಲಮನ ವಚನ. ಯಾರಿಗೋ ಸಂಪತ್ತು ಬಂದರೆ ಯಾರೋ ಯಾತಕ್ಕೋ ಚಿಂತಿಸುತ್ತಾರೆ. ಯಾರಿಗೋ ಬಡತನ ಬಂದರೆ ಯಾಕೋ ಸುಮ್ಮನೆ ಮರುಗುತ್ತಾರೆ. ಇದು ಯಾಕೆ, ಇದು ಏಕೆ, ಇದೇ ಮಾಯೆ. ಎಲ್ಲರನ್ನೂ ಕಾಡಿಸುವ ಮಾಯೆ. ಜಗತ್ತಿನ ಅತಿ ಶ್ರೀಮಂತರ ಬಗ್ಗೆ ತಿಳಿಯುವ ಅಸೆ, ಅವರನ್ನು ಕುರಿತು ಕಾಮೆಂಟ್ ಮಾಡುವ ಚಪಲ. ಯಾರಿಗೋ ದುಃಖ ಒದಗಿದರೆ ಅವರಿಗಾಗಿ ಅಯ್ಯೋ ಅನ್ನುತ್ತಿದ್ದೇವೆ ನಾವು ಎಂಬುದು ಎಲ್ಲರಿಗೂ ತಿಳಿಯಲಿ ಎಂಬ ಚಪಲ. ಇತರರ ಶ್ರೀಮಂತಿಕೆ, ಇತರರ ದುಃಖ ಇವುಗಳೇ ನಮ್ಮ ಮನಸ್ಸಿನ ಲೋಕದ ಬಹುಪಾಲು ತುಂಬಿಕೊಂಡಿರುವುದೇ ಒಂದು ವಿಚಿತ್ರ. ಹಾಗಾಗಬಾರದಿತ್ತು ಅಯ್ಯೋ ಅನ್ನುವ ಸಹಾನುಭೂತಿಗೆ ಅರ್ಥವಿಲ್ಲ. ಹಾಗೆಯೇ ಇನ್ನೊಬ್ಬರ ಹಿರಿಮೆ ಕಂಡು ಕೊಂಡಾಡುವುದೋ ಕರುಬುವುದೋ, ಅದಕ್ಕೂ ಅರ್ಥವಿಲ್ಲ. ಆದರೆ ಈ ಅರ್ಥವಿಲ್ಲದ ಚಿಂತೆಗಳೇ ನಮ್ಮನ್ನು ಆಕ್ರಮಿಸಿಕೊಳ್ಳುವುದೇಕೆ?

ಅಲ್ಲಮನಂತೆಯೇ ಬಸವ ಕೂಡ “ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮ” ಎಂದಿರುವುದುಂಟು. ನಾವು ಯಾವುದನ್ನು ತೀರ ಸರಳವಾಗಿ ಮರುಕ ಮತ್ತು ಸಂತೋಷ ಅನ್ನುತ್ತೇವೋ ಅವೆಲ್ಲ ಎಷ್ಟು ಅರ್ಥಹೀನ ಅನ್ನುವುದನ್ನು ಈ ವಚನ ಹೇಳುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೇರು!
Next post ಬೆಂಕಿಯ ಮೂಲ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys